Tuesday 27 September 2011

ಒಂದು ಪ್ರಮೇಯದ ಕಥೆ - ತಪ್ಪಾಗಿ ಓದದಿರಿ ಪ್ರೇಮಕಥೆಯೆಂದು !


ಪ್ರಮೇಯ : ಮೂರು ಮತ್ತೆ ಒಂದರ ಬೆಲೆ ಸಮವಾಗಿದೆ.
ಸಾಧನೆ :- ಇವತ್ತು ಬಸ್ಸಲ್ಲಿ ತುಂಬಾ ರಶ್ಶು ! ನನಗೆ ಸೀಟು ಸಿಕ್ಕಿತ್ತು. ಪಕ್ಕದಲ್ಲಿ ಕೂತವನೊಬ್ಬ ಅಲ್ಲೆ ಹತ್ತಿರದ ನಿಲ್ದಾಣದಲ್ಲಿಳಿಯಬೇಕಿತ್ತು. ಐದು ರೂಪಾಯಿ ಕೊಟ್ಟ ನಿರ್ವಾಹಕನಿಗೆ. ನಾಲ್ಕು ರೂಪಾಯಿ ಟಿಕೇಟ್ ಆದ್ದರಿಂದ ಇಬ್ಬರೂ ಲಾಭ ಮಾಡಿಕೊಂಡರು. ನಿರ್ವಾಹಕ ಟಿಕೇಟ್ ಕೊಡದೆ ಎರಡು ರೂಪಾಯಿ ವಾಪಸ್ಸು ಮಾಡಿದ.
ನಿರ್ವಾಹಕನಿಗೆ ಟಿಕೇಟ್ ಕೊಡದೆ ಆದ ಲಾಭ = ೩ ರೂಪಾಯಿ !
ಪ್ರಯಾಣಿಕನಿಗೆ ಆದ ಲಾಭ = ೧ ರೂಪಾಯಿ.

ನಿಲ್ದಾಣದಲ್ಲಿ ಇಳಿಯುವ ಮೊದಲೇ ಬಂದ ಪರೀಕ್ಷಕರು ತಪಾಸಣೆ ಮಾಡಿದರು.
ಟಿಕೇಟ್ ಕೊಡದ ನಿರ್ವಾಹಕನಿಗೆ ಹಾಕಿದ ದಂಡ = ೫೦೦ ರೂಪಾಯಿ
ಪ್ರಯಾಣಿಕನಿಗೆ ಹಾಕಿದ ದಂಡ = ೫೦೦ ರೂಪಾಯಿ.

ಆದ್ದರಿಂದ ಮೂರು ಮತ್ತು ಒಂದರ ಬೆಲೆ ಸಮವಾಗಿರುತ್ತದೆ .

14 comments:

  1. ಟಿಕೇಟ್ ಕೊಡದ ನಿರ್ವಾಹಕನಿಗೆ ಹಾಕಿದ ದಂಡ =ಪ್ರಯಾಣಿಕನಿಗೆ ಹಾಕಿದ ದಂಡ = ೫೦೦=ಈಶ್ವರ ತತ್ವಕ್ಕೆ ಪ್ರಮೇಯದ ಕಥೆ!!!

    ReplyDelete
  2. ಹಹ್ಹಾ ಕಿರಣಣ್ಣ :-) ೧ ಮತ್ತು ೫೦೦ ಕೂಡ ಸಮವೇ!

    ReplyDelete
  3. ಹೌದು, A=B, B=C ಆದರೆ A=C ಆಗಿರುತ್ತದೆ .. :): ):)

    ReplyDelete
  4. Ishwara tatwa Sooper....!!! :D

    ReplyDelete
  5. ಪ್ರಿಯ ಭಟ್ರೇ,
    ಇಲ್ಲಿರುವ ನಿಮ್ಮ ಚಿಕ್ಕ ಚೊಕ್ಕ ಕತೆಗಳ ಪೈಕಿ almost ಎಲ್ಲವನ್ನೂ ಓದಿದೆ.
    ಈ ಎಲ್ಲ ಪುಟ್ಟ ಪುಟ್ಟ ಬರಹಗಳು ಮನಸಿಗೆ ಖುಷಿ ಮತ್ತು ಭಾವಕ್ಕೆ ತಂಪೆರೆದಿವೆ..
    ಮುಂದುವರೆಸಿ.ಶುಭಾಶಯಗಳು.

    ReplyDelete
  6. ಲಾಭದ ಚೆಟ್ಟಿ ಬೊಳ್ಳಕ್ಕೆ ಪೋಯ (ಲಾಭಕ್ಕೆ ಆಶಿಸಿದ ಶೆಟ್ಟಿಯಾರ್ ಬೊಳ್ಳ/ಬೆಳ್ಳ/ನದಿ ಹೊಳೆಗಳಲ್ಲಿ ಮಳೆಗಾಲದ ನೆರೆ ಗೆ ಕೊಚ್ಚಿ ಹೋದ)

    ReplyDelete
  7. ಅಬ್ಬಾ... ಇಂತಹ ಪ್ರಮೇಯ ನಮ್ಮ ಗಣಿತದ ಶ್ಯಾಂಪು ಸಾರು ಕೂಡ ಹೇಳಿಕೊಟ್ಟಿಲ್ಲ ನೋಡಿ..

    ReplyDelete