Wednesday 7 September 2011

ಕೃಷ್ಣನ್ ಸ್ಟೋರಿ ..


ಇಮಾಂ ಸಾಬಿ ಊರಿಗೆ ಹೆಸರುವಾಸಿ, ಮಗನಿಗೆ ವಾಸಿಯಾಗದ ಪೋಲಿಯೋ ಇದ್ರೂ ಬದುಕೋ ಮಾರ್ಗ ಅಂತ ಒಂದು ಅಂಗಡಿ ಹಾಕ್ಕೊಟ್ಟಿದ್ರು. ನಮ್ದುಕೆ ಅಂಗ್ಡೀಲಿ ಒಂದು ಕೇಜಿದು ರೈಸ್ದು ಬೆಲೆ ಇಪ್ಪತ್ತೇ ಇರ್ತಾವ್ ಅಂತ ಹೇಳಿ ಒಳ್ಳೆ ಬಿಸಿನೆಸ್ ಮಾಡ್ತಿದ್ದ ಮಗ.

ಹಳ್ಳಿ ಬೆಳೆದಂತೆ ಡಿಗ್ರೀ ಓದಿದ್ದ ಸೋಮಪ್ಪನ ಮಗ ಕೃಷ್ಣ ಕೂಡ ಸೂಪೆರ್ ಮಾರ್ಕೆಟ್ಟು ಓಪನ್ ಮಾಡಿದ. ಸಾಬಿಯ ಬಿಸಿನೆಸ್ ಕೂಡ ಫ್ರಿಡ್ಜ್ ಹೊರಗೆ ಇಟ್ಟಿದ್ದ ಕೊತ್ತಂಬರಿ ಸೊಪ್ಪಾಯ್ತು. ಕೊನೆಗೆ ಸಹಿಸಲಾಗದ ಸಾಬಿ ಸೂಪರ್ ಮಾರ್ಕೆಟ್ಟಿಗೆ ಬೆಂಕಿ ಹಚ್ಚುವ ಪ್ಲಾನ್ ಮಾಡಿದ.

ಸೂಪರ್ ಆಗೇ ಬೆಂಕಿ ಬಿತ್ತು. ಉರಿಯಿತು, ಎಲ್ಲಾ ಬೇಯುವ ಬದಲು ಸುಟ್ಟು ಹೋಯಿತು. ಇಮಾಂ ಸಾಬಿಗೆ ಮಗನ ಕೃತ್ಯ ಸರಿ ಕಾಣಲಿಲ್ಲ.
ಬುದ್ದಿಯಲ್ಲೂ ಪೋಲಿಯೋ ಇರುವ ಮಗ ಈಗ ಬಸ್ ಸ್ಟಾಂಡಲ್ಲಿ ಇರ್ತಾನೆ, ಕೃಷ್ಣ ಇನ್ಸೂರೆನ್ಸ್ ಬಂದ ಮೇಲೆ ಪುನ: ಕೆಟ್ಟು ಹೋಗಿರೋ ಸೂಪರ್ ಮಾರ್ಕೆಟ್ಟು ಉದ್ಘಾಟನೆ ಮಾಡ್ತಾನಂತೆ.

3 comments:

  1. ಎಂಥಾ ಜನ ಇವ್ರು? ತನಗೆ ಸಿಕ್ಕಿರೋ ಅವಕಾಶಕ್ಕೆ ದೈವಕ್ಕೆ ಕೈ ಮುಗಿಯದೆ, ಪೈಶಾಚಿಕ ಕೃತ್ಯಕ್ಕೆ ಇಳಿದದ್ದು ಅಸಹ್ಯ ಹುಟ್ಟಿಸಿತು.
    ಅಂತೂ ಕಡೇಲಿ ಸತ್ಯಕ್ಕೇ ಜಯ..

    ReplyDelete
  2. idu modale fbli odidde, illi innodu sala odi kushi ayitu!

    ReplyDelete