Thursday 15 September 2011

ಚಂದಿರನ ನಗು !


ನಿನ್ನೆ ರಾತ್ರಿ ಆಗಸದಲ್ಲಿ ಚಂದ್ರ ಜೋರಾಗಿ ನಗುತ್ತಿದ್ದ. ಕಾರಣ ಕೇಳಿದೆ. ಅವನ ಕಥೆ ಚೆನ್ನಾಗಿತ್ತು , ನಿಮಗೆ ಹೇಳಬೇಡವೇ ?
"ನಿನ್ನೆ ಆ ಬಡಾವಣೆಯ ಎರಡನೇ ಮನೆ ಇದೆಯಲ್ಲ, ಅಲ್ಲಿ ಒಂದು ಪುಟ್ಟ ಪಾಪುವಿದೆ. ನಿನ್ನೆ ಊಟವನ್ನೇ ಮಾಡದ್ದಕ್ಕೆ ಆ ಪಾಪುವಿನ ಅಮ್ಮ ಟೇರೆಸ್ ಮೇಲಿಂದ ನನ್ನನ್ನು ತೋರಿಸಿ ತಿನ್ನಿಸುವ ಪ್ರಯತ್ನ ಮಾಡುತ್ತಿದ್ದಳು. ಆದರೂ ಪಾಪು ತಿನ್ನಲೇ ಇಲ್ಲ. ನೀನು ತಿನ್ನದಿದ್ದರೆ ಚಂದಮಾಮಂಗೆ ಊಟ ಕೊಡುತ್ತೇನೆ ಅಂದರೂ ಆ ಪಾಪು ಊಟವನ್ನೊಪ್ಪಲೇ ಇಲ್ಲ. "
ಅದಕ್ಯಾಕೆ ನಗು ಚಂದಿರಾ ?
ಅಲ್ಲ, ಮಗುವಿಗೆ ಆಶೆ ಬರಿಸಲು ಅಮ್ಮ ಆ ಊಟವನ್ನು ಒಂದೊಂದೇ ಮುದ್ದೆ ಕಟ್ಟಿ ನನ್ನೆಡೆಗೆ ಎಸೆದಳು. ನನಗೋ ತಿನ್ನಲಾಗುವುದಿಲ್ಲ, ಬಿಡು ನನ್ನ ವರೆಗೆ ತಲುಪುವುದೇ ಇಲ್ಲ !
ನನಗೆ ಇನ್ನೂ ಆಶ್ಚರ್ಯ, ನಗುವುದ್ಯಾಕೆ ಹೇಳು ಚಂದಿರಾ ?
ಆ ಅನ್ನದ ಉಂಡೆಗಳು ಎಸೆದಿದ್ದು ನನಗಾದರೂ ಬಿದ್ದಿದ್ದು ಕೆಳಗಿನ ಗುಡಿಸಿಲಿಗೆ, ಅಲ್ಲಿಯೂ ಒಂದು ಸಣ್ಣ ಪಾಪು ಇತ್ತು. ಅಮ್ಮ ಊಟ ಕೊಡದ್ದಕ್ಕೆ ಚಂದಮಾಮ ಊಟ ಕೊಟ್ಟ ಎಂದೇ ನನ್ನನ್ನು ನೋಡಿ, ಹೆಕ್ಕಿ ಹೆಕ್ಕಿ ತಿಂದ ಮಗುವಿನ ನಗು ನನ್ನಲ್ಲಿ !!!

೧೫-೦೯-೨೦೧೧

10 comments:

  1. ಮನಸ್ಸು ಆರ್ಧ್ರವಾಯಿತು.
    ಯಾಕೋ ನನ್ನ ಬಡತನದ ದಿನಗಳು ನೆನಪಾದವು. ಯಾವ ತಾಯಿಯಾದರೂ ಚಂದಮಾಮನೆಡೆಗೆ ಅನ್ನದ ಮುದ್ದೆ ಎಸೆದು, ಅದು ನನ್ನತ್ತ ಬಿದ್ದು ಹೊಟ್ಟೆ ತುಂಬಿಸಬಾರದಿತ್ತೆ ಅನಿಸಿತು!

    ReplyDelete
  2. ಈಶ್ವರ್, ಅದ್ಭುತ ಕಲ್ಪನೆ.......... ಅಲ್ಲಿ ಹಸಿದ ಮಗುವಿನ ಹೊಟ್ಟೆ ತುಂಬಿದರೆ ಇಲ್ಲಿ ನಮ್ಮ ಮನಸ್ಸು ತುಂಬಿ ಬಂತು.

    ReplyDelete
  3. ಕಿರಣಣ್ಣ.. ಸೂಪರ್ ಕಥೆ.. :-)

    ReplyDelete
  4. ನಿಮ್ಮ ಕಲ್ಪನೆಗೆ ನನ್ನ ಸಲಾಮು...! ಪಕ್ಕಾ ಆಲೋಚನೆ.

    ReplyDelete
  5. Ajji namage henge kottugondittu...nenapidda....

    ReplyDelete
  6. ಕಥೆ ತುಂಬಾ ಚೆನ್ನಾಗಿದೆ ಕಿಣ್ಣಣ್ಣ..

    ReplyDelete
  7. kinana idu rashi ishta aatu.. chennagiddu..

    ReplyDelete