Monday 10 September 2012

ಟಿಪ್ಪರ್ ಮತ್ತೆ ಕಾರು!


ರಂಗಪ್ಪ ಎಂದಿನಂತೆ ಗದ್ದೆ ಕೆಲಸ ಮುಗಿಸಿ ಟಿಲ್ಲರ್ ಏರಿ ಮನೆ ಕಡೆ ಹೊರಟಿದ್ದ. ಹೈವೇ ಬದಿಗಿದ್ದ ಮನೆಯ ಹತ್ತಿರ ಬಂದ. ವಿದೇಶೀ ಕಾರೊಂದು ೧೦೦ ಕಿಲೋಮೀಟರ್ ವೇಗದಲ್ಲಿ ಬಂದು ಟಿಲ್ಲರ್’ಗೆ ಹೊಡೆದು ಪಲ್ಟಿಯಾಯಿತು.
ಟಿಲ್ಲರ್ ಹಾಗೇ ಇತ್ತು! ಕಾರು ಮಗುಚಿ ಬಿತ್ತು. ಕಾರಿನೊಳಗಿಂದ ಆರ್ತನಾದ ಮುಗಿಲುಮುಟ್ಟಿತ್ತು. ಅದೆಲ್ಲಿಂದ ಬಂದರೋ ಏನೋ ನೂರಿನ್ನೂರು ಜನ ಬಂದು ಕಾರಿನ ಫೋಟೋ, ಒಳಗಿದ್ದವರನ್ನ ಹೊರಗೆಳೆಯುವುದು ಎಲ್ಲಾ ಪ್ರಾರಂಭವಾಯಿತು. ಏನೂ ಆಗಿರಲಿಲ್ಲ ಜನರಿಗೆ.
ಕ್ರಮೇಣ ಕಾರಿನ ಗ್ಲಾಸು ಒಡೆದದ್ದು, ಮತ್ತಿತರ ಅಂಗಾಂಗ ಊನಗೊಂಡಿತ್ತು ಕಾಣತೊಡಗಿತು.
ಹೀಗೇ ಚರ್ಚೆ ಸಾಗುತ್ತಾ, ಕಾರಿನ ಅಂದಾಜು ನಷ್ಟವೇನು? ಕಾರು ಯಾವ ಕಂಪೆನಿಯದ್ದು? ಎಷ್ಟು ಬೆಲೆಬಾಳಬಹುದು ಎಂದೆಲ್ಲಾ ಚರ್ಚೆಯಾಗತೊಡಗಿತು.
-
ಯಾವುದೋ ಮೂಲೆಯಲ್ಲಿ ಟಿಲ್ಲರ್ ಪಕ್ಕ ಉಸಿರಾಡದೇ ಮಲಗಿದ್ದ ರಂಗಪ್ಪನಿಗೆ ಇದ್ಯಾವುದೂ ತಿಳಿದಿರಲಿಲ್ಲ.

6 comments:

  1. ಸಿರಿವಂತರ ಮೈಯಲ್ಲಿ ಹರಿವುದು ರಕ್ತ...ಬಡವರ ಮೈಯಲ್ಲಿ ಹರಿವುದು ಬೆವರಿನ ನೀರು..ಮನುಜ ಅಂತಸ್ತಿನ ಮೆಟ್ಟಿಲು ಬಿಟ್ಟು ಕೆಳಗೆ ಇಳಿಯುವುದೇ ಇಲ್ಲ...ತುಂಬಾ ಬೇಸರವಾಗುತ್ತದೆ..ಮನ ತಟ್ಟಿದ ಲೇಖನ...

    ReplyDelete
  2. ಇದು ಎಂಥ ಲೋಕವಯ್ಯಾ ?

    ReplyDelete
  3. ತುಂಬಾ ಒಳ್ಳೆಯ ಕತೆ ಕಿರಣ. ನಮ್ಮ ಸಂವೇದನೆಗಳು ದುಡ್ಡಿನ ಜೊತೆ ಜೊತೆಗೆ ಬದಲಾಗುತ್ತಿರುವ ಸೂಕ್ಷ್ಮ ತುಂಬಾ ಚನ್ನಾಗಿ ಬಂದಿದೆ :)

    ReplyDelete
  4. ಸಾಹುಕಾರನಿಗೆ ಇರುವ ಮ್ರ್ಯಾದೆ ಬಡವನಿಗೆ ಎಲ್ಲಿದೆ ಕಿರಣರೇ. ಈ ಸಾಮಾಜಿಕ ವೈರುಧ್ಯವನ್ನು ಸರಿಯಾಗಿ ಝಾಡಿಸಿದ್ದೀರ.

    ReplyDelete
  5. ದೌಲತ್ತಿಗೆ ಮಣೆ ಹಾಕುವ ನಮ್ಮ ಗಳ ಕಥೆ ಚೆನ್ನಾಗಿ ಬರೆದಿದ್ದಿರಾ...

    ReplyDelete