Thursday 24 May 2012

ಅಯ್ಯೋ ಪೆಟ್ರೋಲೂಊ...


ಅರೆ ಇದೇನಿದು.. ಬಂದು ತುಂಬಾ ಸಮಯವಾಗಿಲ್ಲ. ಸುಸ್ತೋ ಸುಸ್ತು.
ಲೇ ಇವಳೇ ಒಂದು ಗ್ಲಾಸು ನೀರು ಕೊಡು! ನೀರನ್ನ ಸರೀ ನೋಡಿದರೆ ಪೆಟ್ರೋಲ್ ನೋಡಿದಂತೆನಿಸುತ್ತದೆ. ಆಹಾ.. ಪೆಟ್ರೋಲು ! ಹೌದೇ ಹೌದು , ಇದೇ ಪೆಟ್ರೋಲು.
ಎಲ್ಲಿಂದ ತಂದೆ ಈ ನೀರನ್ನ?
ನಮ್ಮ ಬೋರ್ ನೀರೇ ಅದು ?
ನೀರಲ್ಲ ಇದು. ಪೆಟ್ರೋಲ್ ಕಣೇ.. ಶ್ ! ಯಾರಿಗೂ ಹೇಳಬಾರದು ಇದನ್ನ.
---
ಎಂತಹಾ ಆಶ್ಚರ್ಯ, ಸುಮಾರು ನಲ್ವತ್ತು ಸಾವಿರ ಖರ್ಚು ಮಾಡಿ ಕೊರೆಸಿದ್ದ ಬೋರ್ ವೆಲ್ ಈಗ ಸಾರ್ಥಕ.. ಸ್ವಿಚ್ ಒತ್ತಿದರೆ ಸಾಕು ಶುದ್ದ ಪೆಟ್ರೋಲ್ ಬರುವುದು..
ದಿನಕ್ಕೆ ೧೦ ಲೀಟರ್ ಮಾತ್ರ ತೆಗೆದರೆ ಸಾಕಪ್ಪಾ.. ನನಗೆ ಅತಿ ಆಸೆ ಇಲ್ಲ. ಸ್ವಲ್ಪವೇ ಬಳಸಬೇಕು, ಯಾರಿಗೂ ತಿಳಿಯದಂತೆ.
ಹುಂ, ಇನ್ನೇನು ಮಳೆ ಬರುವ ಹಾಗಿದೆ. ಚಾವಡಿಯ ಹೆಂಚಿನ ಮಾಡು ರಿಪೇರಿ ಮಾಡಲು ಒಂದು ಮೂವತ್ತು ಲೀಟರ್ ಪೆಟ್ರೋಲ್ ಸಾಕಾಗಬಹುದು. ಮಗಳ ಮದುವೆಗೆ ಒಂದು ಸಾವಿರ ಲೀಟರ್ ಬೇಕಾದೀತು. ದಿನಸಿ ಅಂಗಡಿಯ ಸಾಲದ ಬಾಕಿ ತೀರಿಸಲು ಒಂದಿನ್ನೂರು ಲೀಟರು ಪೆಟ್ರೋಲು. ಅವಳು ಅಡವಿಟ್ತ ಚಿನ್ನವನ್ನು ಬಿಡಿಸಬೇಕು ಅದಕ್ಕೊಂದು ನೂರೈವತ್ತು ಲೀಟರ್ !!
ಮರೆತೇ ಬಿಟ್ಟಿದ್ದೆ, ಮಗನ ಅಡ್ಮಿಶನ್ ಗೆ ಎಷ್ಟು ಲೀಟರ್ ಪೆಟ್ರೋಲ್ ಬೇಕಾದೀತು ? ಕೇಳಬೇಕು..

ಪೆಟ್ರೋಲ್ ಮುಗಿಯಲಾರದು ಅಲ್ವೇ ? ಮುಗಿದೇ ಹೋದರೆ ? ಅಯ್ಯೋ, ಬೋರ್ ವೆಲ್ ಬದಿಯಲ್ಲಿ ಬೆಂಕಿ ಉರಿಸದಂತೆ ಹೇಳಬೇಕು.. ಲೇ ಇವಳೇ ?
ಏನ್ರೀ ...
ಬೋರ್ ವೆಲ್ ಬಳಿ ಇರುವ ಕಸದ ರಾಶಿಗೆ ಬೆಂಕಿ ಹಾಕಬೇಡ್ವೇ !
ನಿಮ್ ಬೋರ್ ವೆಲ್ ಗೆ ಬೆಂಕಿಬಿತ್ತು !
ಅಯ್ಯೋ ಪೆಟ್ರೋಲೂಊಊ..
ನಿಮಗೇನ್ರಿ ಆಗಿದೆ, ಸಂಜೆ ಹೊತ್ತಲ್ಲೇ ಮಲಗಿ ಕನಸು ಕಾಣ್ತಾ ಇದ್ದೀರಲ್ಲಾ ?

17 comments:

  1. :) tingala konege X barrel pretrolu .....

    ReplyDelete
  2. ಹೆ ಹೆ. ಇದರಲ್ಲೂ ಹಾಸ್ಯ:-) ಚೆಂದಿದ್ದು :-)

    ReplyDelete
  3. ಹೆಹ್ಹೆ.. ಪೆಟ್ರೋಲೂಽಽ :P

    ReplyDelete
  4. ಒಟ್ಟಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಧರ ಏರಿಸಿ ಏರಿಸಿ, ಬೆಂಗಳೂರಿನಲ್ಲಿ ಸರ್ಕಾರದ ಕುರುಡು ನೀತಿಯಿಂದ ಬೇರೆ ನಗರಗಳಿಗೆ ಹೋಲಿಸಿದರೆ ಬೆಲೆಯಲ್ಲಿ ತಾರತಮ್ಯವಾಗಿ ನಾವು ಬಾಯಿ ಬಡೆದುಕೊಳ್ಳುವಂತಾದರೂ ಸರ್ಕಾರಗಳಿಗೆ ದಿವ್ಯ ನಿದ್ರೆ.

    ಒಳ್ಳೆ ಕನಸ್ಸು ಕಂಡಿದ್ದೀರಿ, ಪೆಟ್ರೋಲ್ ತುಂಬಿಕೊಳ್ಳಲು ಯಾವಾಗ ಬರಲಿ?

    ReplyDelete
  5. hehe mast iddu kirana...... nangondinnuru Ltr saaku ati ase enu ille nanage ..:)

    ReplyDelete
  6. ಓಂ ಪೆಟ್ರೋಲಾಯ ನಮಃ....!!

    ReplyDelete
  7. ಥೋ, ಮೊನ್ನೆ ತನಕ ಸರಿ ಇದ್ದಿದ್ಯಲ ಭಾವ?

    ReplyDelete
  8. ಹಹ್ಹಹ್ಹ ...ದುಬಾರಿ ಕನಸು ,ಹಾಸ್ಯ ತುಂಬಾ ಚೆನ್ನಾಗಿದೆ :)

    ReplyDelete
  9. ಹ್ಹಹ್ಹ ಸೂಪರ್ ಕನಸು :)

    ReplyDelete
  10. ಹ್ಹೆ ಹ್ಹೆ ಹ್ಹೆ!
    ಇದ್ನ ಓದಿ ಯಾನು ಯನ್ ಆಯಿ ಬಿದ್ದೂ ಬಿದ್ದೂ ನೆಗ್ಯಾಡಿದ್ದೆಯಾ!!!
    ಸೂಪರ್ರೋ ಐಕೆಬಿ!
    :D :D :D

    ReplyDelete
  11. ಹುಅಹಹ್ಹಹಹಹಹ!!!!! :P :P ಮಸ್ತಿದ್ದು ಕಿಣ್ಣಣ್ಣ :)

    ReplyDelete
  12. ಬೋರವೆಲ್ ನಲ್ಲಿ ಪೆಟ್ರೋಲ್ ಬಂದರೆ ಒಳ್ಳೇದಲ್ವೆ! ತಮ್ಮ ಇಣುಕು ಚೆನ್ನಾಗಿದೆ.

    ReplyDelete
  13. ಬೋರ್ ವೆಲ್ ನಲ್ಲಿ ಪೆಟ್ರೋಲ್ ಬಂದರೆ ಒಳ್ಳೇದಲ್ವೆ!೧ ತಮ್ಮ ಇಣುಕು ಭಜರಿಯಾಗಿದೆ... ಅದು ಕನಸಲ್ಲಿ!!

    ReplyDelete