Saturday 21 April 2012

ನ ಚ ನಾರೀ ಹೃದಿಸ್ಥಿತಂ !!


ಆಹಾ, ಬೆಳಗ್ಗೆ ಏಳುವಾಗಲೇ ಲೇಟ್. 7.15 ಕ್ಕೆ ಇಟ್ಟ ಅಲರಾಮನ್ನ ನಿಲ್ಲಿಸಿ ಇನ್ನು ಐದು ನಿಮಿಷ ನಿದ್ದೆ ಹೋಗೋಣವೆಂದು ಪುನಃ ಮಲಗಿದ್ದಕ್ಕೆ ಏಳುವಾಗ ಎಂಟು ಘಂಟೆ. ನೀರಲ್ಲಿ ಆಟ ಆಡಿ, ಪಟ ಪಟ ಡ್ರೆಸ್ಸಿನ ಒಳಗೆ ಹೋಗಿ ಓಡಿ ಬಸ್ ಸ್ಟಾಪಿಗೆ ಬಂದ. ಬೆಳಗ್ಗೆ ಎಂತಹ ಅಸಹನೀಯ ಎಂದೆನಿಸಿ ಬಿಟ್ಟಿತ್ತು ಅವನಿಗೆ..

ಓಹ್.. ಖಾಲಿ ಬಸ್ಸನ್ನೂ ಕಾಯುವಂತಿಲ್ಲ. ಎಲ್ಲಾ ಬಸ್ಸುಗಳು ಆರು- ಏಳು ತಿಂಗಳುಗಳ ಗರ್ಭಿಣಿಯರು.. ಹೇಗೋ ಒಂದು ಬಸ್ಸಿಗೆ ಏರಿದ. ಎದುರು ಹೋಗಿ ಎನ್ನುವ ಕಲಿಯುಗದ ಅಭಿಮನ್ತ್ಯು ಕಂಡಕ್ಟರನ ಮಾತನ್ನು ಪಾಲಿಸಿ ಮುಂದೆ ಹೋದ..

ಕೆಂಪು ಕೆನ್ನೆಯ, ನೀಳಕೇಶದ ಬೆಳ್ಳಗಿನ ತರುಣಿ ಆಹ್ ಅವನ ಆನಂದಕ್ಕೆ ಪಾರವೇ ಇಲ್ಲ .ಅವಳ ಸಾಮೀಪ್ಯ ಇವನನ್ನು ತುಂಬಾ ಉತ್ಸಾಹಿತನನ್ನಾಗಿ ಮಾಡಿಸಿತು. ಅವಳು ಧರಿಸಿದ್ದ ಐ ಡಿ ಕಾರ್ಡಿನಲ್ಲಿದ್ದ ಐಸಿಐಸಿಐ ಬ್ಯಾಂಕಿನ ಚಿಹ್ನೆ ಕಂಡು ಇನ್ನೂ ಖುಷಿಯಾಯ್ತು.

ಅವಳಲ್ಲಿ ಮಾತನಾಡಬೇಕು ಎಂಬ ಆಸೆ ಅವನಿಗೆ. ಅವಳು ನೋಡುತ್ತಾಳೇನೋ ಎಂದು ಹಾರೈಸತೊಡಗಿದ. ನೋಡಿದಳು.. ಕಣ್ಣಿನಲ್ಲಿ ಏನೋ ಆಕರ್ಷಣೆ. ಮಾತಾಡಿದಂತೆನಿಸಿತು ..ಕಣ್ಣು ಮಾತಾಡಿದರೆ ಸಾಕೇ ?
ಹಾಯ್ ..
ಹಾಯ್ ಎಂದಳವಳು.
ನಿಮ್ಮ ಹೆಸರು ಮೇಡಂ ?
ಅನನ್ಯ ,

ಏನು ಮಾಡ್ತಾ ಇದೀರಿ ಅನನ್ಯರವರೇ ?
ಅನನ್ಯ ಎನ್ನಿ ಸಾಕು! ನಾನು ಕ್ರೆಡಿಟ್ ಮ್ಯಾನೇಜರ್ ಆಗಿದ್ದೇನೆ ಬ್ಯಾಂಕಿನಲ್ಲಿ.
ಓಹೋ, ಸರಿ.
ಹ್ಮ್
ನಿಮ್ಮನ್ನ ಏನೋ ಕೇಳಬೇಕು ಬೇಜಾರಿಲ್ಲ ಅಲ್ವೇ ?
ಹಾಂ ! ಏನು ?
ಅಲ್ಲ  ಕೇಳಬಹುದೇ ?
ಹುಂ ! ಕೇಳಿ.

ಹೇಗೆ ಕೇಳೋದು ? ನೀವೇನೂ ತಪ್ಪು ತಿಳ್ಕೊಳಲ್ಲ ತಾನೆ ?
ಇಲ್ಲ ಬಿಡಿ, ಕೇಳಿ.(ಕೆಂಪಾಗುತ್ತಾ!)
ಸರಿ. ಆದ್ರೂ ಮೊದಲ ಪರಿಚಯದಲ್ಲೇ ಹೀಗೆ ಕೇಳೋದು ಸರೀನಾ ?
ಪರವಾಗಿಲ್ಲ ಕೇಳಿ, ನಿಮ್ಮನ್ನು ನಾನು ತುಂಬಾ ದಿನಗಳಿಂದ ನೋಡ್ತಾ ಇದೀನಿ..
ಓಹ್ , ಹೌದೇ , ಹಾಗಿದ್ದಲ್ಲಿ ಕೇಳಬಹುದು ಅಂತೀರಾ ?
ಹೌದು , ಕೇಳಿ, ಒಪ್ಪಿಗೆಯಾದ್ರೆ ಸರಿ ಅನ್ನುತ್ತೀನಿ.
ಹುಂ, ಹಾಗಿದ್ರೆ ಕೇಳೇ ಬಿಡ್ತೇನೆ
(ಅವಳು, ಸ್ವಲ್ಪ ನಾಚಿಕೆ, ಕುತೂಹಲದಿಂದ ನೋಡತೊಡಗಿದಳು)
.
.
.
ಅನನ್ಯಾರವರೆ , ನಿಮ್ಮ ಕಂಪೆನಿಯಲ್ಲಿ ಜಾಬ್ ಓಪನಿಂಗ್ಸ್ ಇದೆಯಾ ? ಡಿಗ್ರೀಯಲ್ಲಿ ೬೫% ಮಾರ್ಕು ಇದೆ. ಕೆಲ್ಸ ಹುಡುಕಿ ಸಾಕಾಯ್ತು. ಇದ್ರೆ ನಿಮ್ಮ ಮೈಲ್ ಐಡಿಗೆ ನನ್ನ ರೆಸ್ಯೂಮ್ ಕಳಿಸ್ತೇನೆ..

ಮತ್ತೆ ಬಸ್ಸಿನಲ್ಲಿ ಅನನ್ಯ ಭೇಟಿಯಾಗಿಲ್ಲ ಅವನಿಗೆ !!

4 comments:

  1. ಅವಳಿಗೆ ಬೇಕಾಗಿದ್ದೇ ಬೇರೆ. ಅವಳ ಕುತೂಹಲಕ್ಕೆ ತಣ್ಣೀರೆರೆಚಿ ಬಿಟ್ಟಿದ್ದೀರಿ. ಓದುಗನನ್ನು ಕೈ ಹಿಡಿದು ಕರೆದುಕೊಂಡು ಹೋಗುವ ನಿಮ್ಮ ಮನಸ್ಸಿನ ಓಘ ತುಂಬಾ ಖುಷಿ ಆಯಿತು. ಅಂತೂ ನಿಮ್ಮ ಬದುಕು ಅವಳಿಗೆ ಬೇಕಿರಲಿಲ್ಲ. ಅವಳ ಬದುಕು ಅವಳಿಗೆ ಬೇಕಿತ್ತು. ಅದನ್ನು ಡಿಗ್ರಿಯ ಶೇ ೬೫ ರಷ್ಟು ಅಂಕಕ್ಕೆ ಸರಿಗಟ್ಟಲಾಗಲಿಲ್ಲ.

    ReplyDelete
  2. ಹ್ಹಹ್ಹಹ್ಹ ಸೂಪರ್ ಕಥೆ :)

    ReplyDelete
  3. he he super climax kinnanna :) ;)

    ReplyDelete