Monday 2 April 2012

ಈಗಿನ ಅಡುಗೆ !!


ಹೊಸ ರುಚಿ :- ( ಹೆಚ್ಚಾಗಿ ಇದೇ ಅಡುಗೆ ಎಲ್ಲರ ಮನೆಯಲ್ಲಿ ಚಾಲ್ತಿಯಲ್ಲಿದೆ )

ಬೇಕಾಗುವ ಸಾಮಗ್ರಿಗಳು :- ಯಾವುದಾದರೂ ತರಕಾರಿ, ಮೆಣಸು, ಕೊತ್ತಂಬರಿ ಇತ್ಯಾದಿ ಸಾಂಬಾರ ಪದಾರ್ಥ ಗಳು, ಸಾಂಬಾರ ಪುಡಿ (ಎಂ ಟಿ ಆರ್ ,ಶಕ್ತಿ , ಆಚಿ ಯಾವುದಾದರೂ ಒಂದು), ಉಪ್ಪು, ಎಣ್ಣೆ, ಪಾತ್ರೆಗಳು, ತೆಂಗಿನಕಾಯಿ..

ಮೊದಲು ತರಕಾರಿಯನ್ನು ಬೇಕಾದ ಹಾಗೆ ಕತ್ತರಿಸಿಕೊಂಡು, ಅದನ್ನ ಒಂದು ಪಾತ್ರೆಯಲ್ಲಿ ಹಾಕಿ ನೀರು ಸೇರಿಸಿ, ಬೇಯಲು ಇಡಿ. ಬೇಯುವ ಸಮಯದಲ್ಲಿ ನಿಮಗಿಷ್ಟವಾದ ಪುಸ್ತಕಗಳನ್ನು ಓದಬಹುದಾಗಿದೆ.
(ಉದಾಹರಣೆಗೆ :- ಶ್ರೀಘ್ರವಾಗಿ ಬೇಯುವ ತರಕಾರಿ ಆದಲ್ಲಿ ರಮ್ಯ ಕವನಗಳನ್ನು, ಹಾಸ್ಯಲೇಖನ ಓದಿ, ಅದೇ ತುಂಬಾ ತಡವಾಗುತ್ತದೆ ಎಂದಾದರೆ ನೀಳ್ಗತೆ, ನವ್ಯ ಕವನಗಳನ್ನ ಓದಿ- ಹೀಗಾದರೂ ಸಾಹಿತ್ಯ ಉಳಿಯಲಿ ).

ಈಗ ತರಕಾರಿ ಬೆಂದಿದೆ. ಬೆಂದ ತರಕಾರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕುದಿಯಲು ಬಿಡಿ. ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಂಬಾರ ಪದಾರ್ಥಗಳನ್ನ ಹುರಿಯಿರಿ. ಹುರಿದ ಪದಾರ್ಥಗಳನ್ನ ತೆಂಗಿನಕಾಯಿ ತುರಿಯ ಜೊತೆ ಸೇರಿಸಿ ರುಬ್ಬಿ. ಅಗತ್ಯಕ್ಕೆ ಸ್ವಲ್ಪ ಹುಳಿಯನ್ನೂ ಹಾಕಿ.

ನಂತರ ಈ ಮಸಾಲೆಯನ್ನು ಬೇಯುತ್ತಿರುವ ತರಕಾರಿಯ ಜೊತೆಗೆ ಸೇರಿಸಿ. ( ಪುನಹ ಕುದಿಸುತ್ತಿರಬೇಕಾದರೆ ಮೂರು ನಾಲ್ಕು ಹನಿಗವನ ಓದಬಹುದು. )

ಈಗ ಸಾಂಬಾರ್ ತಯಾರಾಗಿದೆ. ಇದಕ್ಕೆ ಒಂದು ಸ್ಪೂನಿನಷ್ಟು ಯಾವುದಾದರೂ (ಮೇಲೆ ತಿಳಿಸಿದ) ಸಾಂಬಾರ್ ಪುಡಿಯನ್ನು ಸೇರಿಸಿಬಿಡಿ. ಇನ್ನೂ ಘಮಘಮಿಸುತ್ತದೆ.

ಮುಖ್ಯವಾದ ಸೂಚನೆ :-೧. ಸಾಂಬಾರ್ ಪೌಡರ್ ಗಳನ್ನ ಕಿಚನ್ನಿನಲ್ಲಿ ಯಾರೂ ಕಾಣದಂತೆ ಅಡಗಿಸಿಡಬೇಕು. ಅದನ್ನ ಸೇರಿಸುವಾಗ ಯಾರೂ ಇರದಂತೆ ಎಚ್ಚರವಹಿಸಿ. ೨. ಬೇರೆ ಬೇರೆ ಸಾಂಬಾರ್ ಪುಡಿಗಳನ್ನು ಉಪಯೋಗಿಸಿ. ರುಚಿ ವ್ಯತ್ಯಾಸವಾಗುತ್ತಾ ಇದ್ದರೆ ಅನುಮಾನ ಬರಲಾರದು.

4 comments:

  1. ha ha ha ha... nice kiNNa... :) :D ಚೊಲೋ ಅಡ್ಗೆ ಕಲ್ತಿದ್ದೆ....!! ಅತ್ಗೆಗೆ ಆರಾಮ್..... :P :D

    ReplyDelete
    Replies
    1. ಇನ್ನು ಅತ್ತಿಗೆ ಹುಡ್ಕೋ ಕೆಲ್ಸ :):)

      Delete
  2. ಪಾಕಶಾಸ್ತ್ರ ಪಂಡಿತ ಭಟ್ಟರಿಗೆ ಉಧೋ ಉಧೋ..

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete