Tuesday, 17 April 2012

ಹೆಂಡತಿಯೋ ಅಲ್ಲ ಪ್ರೇಯಸಿಯೋ?

ದಿನಾ ಅವಳನ್ನು ನೋಡುತ್ತಿದ್ದೆ ಅದೇ ಬಸ್ ಸ್ಟಾಪಿನಲ್ಲಿ. ಅವಳೂ ನನ್ನನ್ನ ನೋಡುತ್ತಿದ್ದಳು. ನಾನು ಬೈಕಿನಲ್ಲಿ ಬಂದು ಆ ಬಸ್ ಸ್ಟಾಪಿನ ಪಕ್ಕದ ಅಂಗಡಿಯಿಂದ ಒಂದು ಟೀ ಮತ್ತೆ ಸಿಗರೇಟು ಅವಳಿಗೆ ಕಾಣದಂತೆ ಸೇದಿ, ನನ್ನನ್ನ ಗುರುತಿಸುವಂತೆ ಆಂಗ್ಲ ಪತ್ರಿಕೆಯೊಂದನ್ನು ಕೇಳಿ ಪಡೆಯುವುದು ವಾಡಿಕೆಯಾಗಿತ್ತು !

ಹೀಗೆಯೇ ಒಂದೆರಡು ವಾರಗಳಲ್ಲಿ ೧೦ ಬಾರಿಯಾದರೂ ಹೀಗೆ ನಾನು ನೋಡುವುದು ಅವಳು ನಗುವುದು ನಡೆದಿತ್ತು. ನನ್ನ ಕಛೇರಿಯ ಹತ್ತಿರವೇ ಅವಳನ್ನ ಒಂದು ದಿನ ನೋಡಿದೆ.

ಮರುದಿನ ಧೈರ್ಯ ಮಾಡಿ ಅವಳ ಹತ್ತಿರ ಹೋಗಿ, ಲಿಫ್ಟ್ ಕೊಡಲೇ ಅಂದೆ !
ಅವಳ ಮಾತು "ಹೆಂಡತಿಯ ಹಾಗೆಯೇ ಅಲ್ಲ ಪ್ರೇಯಸಿಯಂತೆಯೇ" ಎಂದಾಗ ಎದೆ ಢಬ್ ಎಂದಿತು !

ಆ ಸುಂದರ ಕಣ್ಣಿನ ಯಾವತ್ತೂ ನಗುತ್ತಿರುವಂತ ಅವಳು ನನ್ನ ಹೆಂಡತಿಯಾದರೆ ? ಓಹ್ ಎಂತಹ ಖುಷಿ . ಇನ್ನೂ ಸ್ವಲ್ಪ ಬೆಳ್ಳಗಿರಬೇಕಿತ್ತು ಎನ್ನಿಸುತ್ತಿದೆ ಆದರೂ ಪರವಾಗಿಲ್ಲ.
ಇಲ್ಲ ಇವಳು ಹೆಂಡತಿಯಾಗೋದು ಯಾಕೋ ಇಷ್ಟವಾಗುತ್ತಿಲ್ಲ. ಇದುವರೆಗೆ ನನ್ನ ಬಗ್ಗೆ ತಿಳಿಯದೆ ಒಂದೇ ಸಲ ಬಂದು ಹೀಗೆ ಹೇಳುವವಳನ್ನು ಹೇಗೆ ನಂಬುವುದು ? ಪ್ರೇಯಸಿಯಾಗುವುದೇ ಒಳ್ಳೆಯದು ಎನ್ನಿಸತೊಡಗಿತು. ಏನೇ ಆಗಲಿ ನಾನೂ ನನ್ನ ಮಿತ್ರರ ಜೊತೆ ಹೆಮ್ಮೆಯಿಂದ ನನಗೊಬ್ಬಳು ಪ್ರೇಯಸಿ ಎಂದು ಬೀಗಬಲ್ಲೆ . ಆದರೂ ಇನ್ನೊಮ್ಮೆ ಕೇಳಿನೋಡಬೇಕು ಎಂದೆನ್ನಿಸಿ ಕೇಳಿದೆ ..

ನೀವಂದದ್ದು ಅರ್ಥ ಆಗಿಲ್ಲ ಮೇಡಂ ಅಂದೆ !
ಅದಕ್ಕವಳು, ಓಹೋ ಹಾಗೇನೂ ತಪ್ಪು ತಿಳಿಯಬೇಡಿ ಸರ್ ! ಹೆಂಡತಿಯ ಹಾಗೆ ಎಂದರೆ ಎರಡೂ ಕಾಲುಗಳನ್ನ ಒಂದೇ ಬದಿಗೆ ಹಾಕಿ ಬೈಕಿನಲ್ಲಿ ಕೂರುವುದು, ಪ್ರೇಯಸಿ ಎಂದರೆ ಕಾಲುಗಳನ್ನ ಎರಡೂ ಬದಿಗೆ ಹಾಕಿ ಕುಳಿತುಕೊಳ್ಳುವುದು ಎಂದು.. ಹೇಗೆ ಕುಳಿತರೆ ನಿಮಗೆ ಬೈಕ್ ಓಡಿಸಲು ಅನುಕೂಲ ?

ಅವಳು ಹೆಂಡತಿಯೂ ಆಗಲಿಲ್ಲ ಪ್ರೇಯಸಿಯೂ ಆಗಲಿಲ್ಲ !

17 comments:

 1. Hahaha..
  ಅವಳು ಆ ಅರ್ಥದಲ್ಲೇ ಕೇಳಿದ್ದು ಅಂತ ನನಗೆ ಅರ್ಥವಾಗಿತ್ತು ಕಣ್ರೀ..
  ನೀವೇನೂ? ಸೀದಾ ಮದುವೆಗೇ ಜಂಪಾಗಿ.... :-))
  -RJ

  ReplyDelete
 2. ಓರ್ವ ಗಂಡುಸಾದವನ ಸಹಜ ವರ್ತನೆ,ನಾಗರೀಕ ಭಾವ, ತುಂಬಾ ಚೆನ್ನಾಗಿ ಬಿಂಬಿಸಿದ್ದೀರಿ. ಅವನಲ್ಲಿ ಸಹಜವಾದ ವಾಂಛೆ ಇಲ್ಲ ಎಂದಾರೆ ಅವನ ಗಂಡಸುತನವನ್ನೇ ಪ್ರಶ್ನಿಸಬೇಕಾಗುತ್ತದೆ.ಅಂಥವನನ್ನು ಹೆಂಗಸೂ ನಂಬುವುದಿಲ್ಲ. ಆದರಿಸುವುದಿಲ್ಲ. ಈಗಿನ ನಮ್ಮ ಗಂಡುಗಳಲ್ಲಿ ಈ ಭಾವ ಕಡಿಮೆಯಾಗಿದೆ. ಅತಿ ನಾಗರೀಕನೆನಿಸಿಕೊಳ್ಳುವ ಸೋಗಲಾಡೀತನಕ್ಕೆ ಅಂಟಿಕೊಳ್ಳುತ್ತ ಸಜ ವರ್ತನೆಯನ್ನು ಮರೆಮಾಚುತ್ತಿದ್ದರ ಫಲ... ಮಾಡು ಸಿಕ್ಕದಲ್ಲಾ...ಮಾಡಿನ ಗೂಡು ಸಿಕ್ಕದಲ್ಲಾ...ಅಂತ ಹಪಹಪಿಸುವಂತಾಗಿದೆ.

  ReplyDelete
 3. Oh...ಅವಳ ಒಂದು ಮಾತು ದೊಡ್ಡ ಕನಸನ್ನೇ ಸೃಷ್ಟಿ ಮಾಡಿತೆ.

  ReplyDelete
 4. thumba chennagide..thamashe anisidaru, arithukolluvudu thumba ide..hats off..:)

  ReplyDelete
 5. ಅಬ್ಬಾ !! ಏನ್ ಕಿಕ್ಕು ಕಿನ್ನಣ್ಣ. ಒಂದು ಸಾಲನ್ನೇ ಇಟ್ಕೊಂಡು ಒಂದು ಕಥೆ ಬರೀತೆ ಅಂದ್ರೆ .. ಚೊಲೋ ಇದ್ದೋ . ಇಷ್ಟ ಆತು :-)

  ReplyDelete
 6. ಅಯ್ಯೋ ಪಾಪ ಕಿರಣ !!! . ಸ್ವಲ್ಪ ಜಾಣತನದಿಂದ ಮೊದಲು ಪ್ರೇಯಸಿಯ ಹಾಗೇ ಕೂತ್ಗೊಂಡು , ಕೇಳ ದಿನ ಅಭ್ಯಾಸ ಆದ್ಮೇಲೆ ಹೆಂಡತಿಯ ಹಾಗೇ ಕೂತರಾಯ್ತು ಅಂದರಾಗಿತ್ತು ! ನಿರಾಶೆ ಬೇಡ .. ಇನ್ನು ಸಮಯವಿದೆ ಬಿಡು ! ಹ ಹಃ ಅ

  ReplyDelete
 7. ಹಾ ಹಾ ಹಾ ಹಾ,... ಸೂಪರ್ ಕಿಣ್ಣಾ.... ಚಿತ್ರ ರಿಪ್ಲೈ ಹಂಗೆ ಹೇಳಕಾಗಿತ್ತು ನೀನು.... :P

  ReplyDelete
 8. hahaha ... nanna ee week end maatru nimma ee sanna kategalinda tumba hasya mayavagiddavu .. dhanyavadagaku :)

  ReplyDelete
 9. ಹ್ಹಹ್ಹಹ್ಹಾ... ಸುಮ್ಮನೆ ತುಂಬಾ ದೂರ ಆಲೋಚನೆ ಮಾಡಿ ಬಂದ್ರಿ...

  ReplyDelete