Monday 7 November 2011

ಗೋಪ ಗೃಹಿಣೀ ನ್ಯಾಯ


ಹತ್ಪಾ ನೃಪಂ ಪತಿಮವಾಪ್ಯ ಭುಜಂಗದಷ್ಟಂ
ದೇಶಾಂತರೇ ವಿಧಿವಷಾತ್ ಗಣಿಕಾಸ್ಮಿ ಜಾತಾ
ಪುತ್ರಂ ಸ್ವಕಂ ಸಮಧಿಗಮ್ಯ ಚಿತಾಂ ಪ್ರವಿಷ್ಟಾ
ಶೋಚಾಮಿ ಗೋಪಗೃಹಿಣೀ ಕಥಮದ್ಯ ತಕ್ರಂ

ಅವಳು ರಾಜನ ಮಡದಿಯಾಗಿ ಸುಖವಾಗಿದ್ದಳು.  ಆದರೂ ಅವಳು ಬೇರೆ ಒಬ್ಬ ಗೆಳೆಯನಲ್ಲಿ ಮನಸ್ಸನ್ನು ಹೊಂದಿದ್ದಳು . ರಾಜನಿಗೆ ವಿಷವನ್ನಿಕ್ಕಿ ಗೆಳೆಯನ ಜೊತೆ ಓಡಿ ಹೋದಳು. ಗೆಳೆಯ ಹಾವಿನ ಕಡಿತಕ್ಕೊಳಗಾಗಿ ಮೃತನಾದನು. ಬೇರೆ ಗತಿಯಿಲ್ಲದೆ ಹೆಂಗಸು ವೇಶ್ಯಾವೃತ್ತಿಯನ್ನ ಕೈಗೊಂಡಳು.

ಈಡಿಪಸ್ಸಿನಂತೆ , ತಾನೇ ಹಡೆದ ಮಗ ಅಕಸ್ಮತ್ತಾಗಿ ಅವಳನ್ನು ಕೂಡಿದನು.ಅನಂತರ ತಾಯಿ ಮಕ್ಕಳೆಂದು ಅರಿತೊಡನೆ , ಪ್ರಾಯಶ್ಚಿತ್ತಾಕ್ಕಾಗಿ ಚಿತೆಯಲ್ಲಿ ಮಲಗಿ ಬೆಂಕಿ ಹಚ್ಚಿಕೊಂಡರು.
ರಾಜಪುತ್ರ ಸುಟ್ಟುಹೋದ, ಇವಳೋ ಅಲ್ಲಿಂದಲೂ ಓಡಿದಳು. ಸುಟ್ಟ ಗಾಯಗಳಿಂದ ನೊಂದ ಇವಳನ್ನು ಒಬ್ಬ ಗೊಲ್ಲ
ಉಪಚರಿಸಿದನು. ಅವನನ್ನೇ ಇವಳು ಮದುವೆಯಾದಳು.

ಕೆಲಸದಂತೆ ಮಜ್ಜಿಗೆ ಮಾರಲು ಪೇಟೆಗೆ ಒಯ್ಯುತ್ತಿರುವಾಗ , ಮಡಿಕೆ ಉರುಳಿಬಿದ್ದು ಮಜ್ಜಿಗೆ ಭೂಮಿ ಪಾಲಾಯಿತು.

ತನ್ನ ಕೆಟ್ಟನಡವಳಿಕೆಗಳಿಂದ ಮಜ್ಜಿಗೆ ಹಾಳಾಯಿತು ಎಂದು ಎಂದು ಅವಳು ಪಶ್ಚಾತ್ತಾಪ ಪಟ್ಟಳಂತೆ.
ಇದನ್ನು "ನ್ಯಾಯ"ದಲ್ಲಿ ಗೋಪ ಗೃಹಿಣೀ ನ್ಯಾಯ ಎನ್ನುತ್ತಾರೆ. ಅಧ್ಬುತ ಕಥೆ ಅಲ್ಲವೇ ?

13 comments:

  1. ಕತೆ ಬಹಳಷ್ಟು ತಿರುವು ಪಡೆದು ಅದ್ಭುತ ಅನಿಸುತ್ತದೆ.
    ಆದರೆ ಗೋಪ ಗೃಹಿಣೀ ನ್ಯಾಯ ದ ವಿಷಯ ಮನದಟ್ಟಗಲಿಲ್ಲ

    ReplyDelete
  2. ಆ ಸ್ತ್ರೀ ಮಹಾರಾಣಿಯಾಗಿದ್ದು ಚಾಂಚಲ್ಯದಿಂದಾಗಿ ಒಂದು ಮಡಿಕೆ ಮಜ್ಜಿಗೆಗಾಗಿ ದುಃಖಿಸುವ ಸ್ಥಿತಿ ಬಂದೊದಗಿತು. ಅದೇ "ನ್ಯಾಯ". ಕೆಲವೊಮ್ಮೆ ಅತೀ ಬುದ್ಧಿವಂತಿಕೆಯಿಂದ, ಅತೀ ವಿಶ್ವಾಸದಿಂದ ಮಾಡುವ, ಕೈಗೊಳ್ಳುವ ಕೆಲಸಗಳಿಂದಾಗಿ ಮೊದಲಿದ್ದ ಸ್ಥಿತಿಗಿಂತಲೂ ಕೆಳಮಟ್ಟಕ್ಕೆ ಬರುವ ಪರಿಸ್ಥಿತಿ ಬರಬಹುದು. ಈ ಸಮಯದಲ್ಲಿ ಈ ನ್ಯಾಯ ಸೂಕ್ತವಾಗಿರುತ್ತದೆ.

    ಪ್ರತಿಕ್ರಿಯೆಗೆ ಧನ್ಯವಾದಗಳು ..

    ReplyDelete
  3. 'ಗೋಪ ಗೃಹಿಣೀ ನ್ಯಾಯ' ಅಂತ ಕೇಳಿದ್ದೆ ಅದರ ತಾತ್ಪರ್ಯ ಈಗ ಮನನವಾಯಿತು.

    ಅರ್ಥ ಮಾಡಿಸುವುದೂ ಒಂದು ಕಠಿಣ ಕಲೆ. ಅದರಲ್ಲಿ ನೀವು ಸಿದ್ಧ ಹಸ್ತರಿದ್ದೀರಿ.

    ReplyDelete
  4. ಕಿಣ್ಣಣ್ಣ ಸೂಪರ್.... ಎಂತೆಂತ ತಿರುವು...! ಆ ಸ್ತ್ರೀಯ ಬಗ್ಗೆ ಅಸಹ್ಯ ಉಂಟಾಯಿತು... ನನಗೂ ಗೋಪ ಗೃಹಿಣಿ ನ್ಯಾಯ ನೀವು ಕೊಟ್ಟ ಒಳ್ಳೆಯ ವಿವರಣೆ ಇಂದ ಅರ್ಥವಾಯ್ತು...

    ReplyDelete
  5. ಕಿಣ್ಣಾ ಸೂಪರ್ :-)

    ReplyDelete
  6. ಸೂಪರೊ ಕಿಣ್ಣ, ಐ ಲೈಕಿಟ್,ಐ ಲೈಕಿಟ್..

    ReplyDelete
  7. super kirananna. Gopa gruhini nyayada vishya gottirle.. Hosa vichara tilsidak dhanyavada

    ReplyDelete
  8. ಅರ್ಥವಾಗದನ್ನು ಬಿಡಿಸಿ ಹೇಳುವುದರಲ್ಲಿ ನೀವು ಸಿದ್ದಹಸ್ತರು ಎಂದು ಪಳವಲ್ಲಿ ಸರ್ ಹೇಳಿದ ಮಾತಲ್ಲಿ ಎರಡು ಮಾತಿಲ್ಲ ನೋಡಿ...
    ಗೋಪ ಗೃಹಿಣೀ ನ್ಯಾಯ ಈಗ ಮನದಟ್ಟಾಯಿತು....
    ಧನ್ಯವಾದಗಳು..

    ReplyDelete
  9. bhaaree laikiddu, madale gonthitthille. dhanyavaadagaLu.
    very nice, did not know it before. thank you.
    avaLu maaDida suruvina kaaryagaLannu avaLu bEku enthanE maaDiddaLu yaakendare she was not happy with herself in the situations she was in. aadudarinda paschaatthaapa paDalilla, thappu anisalilla. kaDege majjige chelliddu thanna ajaagratheyinda antha manassinalli aayithu. she was trying to "escape" from where she was earlier, as she found them unsatisfactory. so, "can you fit in well where you are?" is another lesson one can get from this, allavE, ishwara kirana bhat aNNa ???

    ReplyDelete