Sunday, 6 January 2013

ರಾಮಣ್ಣನ ದೋಸೆ ಹೋಟೆಲ್ ಮಹಿಮೆ.


ನಮಸ್ಕಾರ,
ಹುಂ.. ಹೇಳಿ!
ಅದೇ, ಆ ಮೇಲಿನ ಮನೆಯ ಮಾಬಲಣ್ಣನ ಮನೆಗೆ ಹೋಗ್ಬೇಕಿತ್ತು. ಹೇಗೆ ಹೋಗೋದು ಇಲ್ಲಿಂದ.
ಇನ್ನು ಎರಡು ಮೂರು ಮೈಲಿ ಆಗ್ತದೆ ಮಾರಾಯ್ರೇ.. ರಿಕ್ಷದಲ್ಲಿ ಹೋಗಿ.
ರಿಕ್ಷಾ ಬೇಡ, ನಡ್ಕೊಂಡೇ ಹೋಗ್ಬೇಕು ನಂಗೆ. ನೀವು ದಾರಿ ಹೇಳಿ.
ದಾರಿ ಹೇಳ್ಬೋದು, ಆದ್ರೆ ಕಂಡಾಬಟ್ಟೆ ಉದ್ದ, ಅಡ್ಡ ರಸ್ತೆ ಉಂಟಲ್ಲಾ, ನಿಮಗೆ ಗೊತ್ತಾಗ್ಬೋದಾ?
ಹೆಹ್ಹೆ, ನಾನು ಬೆಂಗಳೂರಲ್ಲೇ ತಿರುಗಾಡಿದ್ದೇನೆ, ಅದೂ ಇಲ್ಲಿ ಏನು ಮಹಾ? ನೀವು ಹೇಳಿ ನಾನು ಬರೆದುಕೊಂಡಾದ್ರೂ ಹೋಗ್ತೇನೆ.
ಸರಿ, ಮೊದಾಲು ಸೀದ ಹೋಗಿ, ಭಗವತಿ ಗುಡಿ ಬರ್ತದೆ, ಅಲ್ಲಿ ಎಡಕ್ಕೆ ತಿರುಗಿ. ಅಲ್ಲಿಂದ ಒಂದನೇಯದ್ದಲ್ಲ ಎರಡನೇ ರಸ್ತೆಯಲ್ಲಿ ಹೋಗಿ.
ಹುಂ, ಮತ್ತೆ,
ಎರಡನೇ ರಸ್ತೆ ಮುಗಿಯುವ ಮೊದಲು ಒಂದು ಸಣ್ಣ ದಾರಿ ಬರ್ತದೆ. ಅದರ ಕೊನೆಗೆ ಒಂದು ಹೋಟೆಲ್ ಇದೆ. ನಮ್ಮ ರಾಮಣ್ಣನ ದೋಸೆಯ ಹೋಟೆಲು, ದೋಸೆ ತಿಂದು ಹೋಗಿ.
ದೋಸೆಯಾ? ಯಾಕೆ? ನಂಗೆ ದಾರಿ ಹೇಳಿ. ಹಸಿವಾಗ್ತಾ ಇಲ್ಲ.
ಸರಿ, ಹೋಟೆಲಿಂದ ವಾಪಸ್ ಬರುವಾಗ ಎಡಬದಿಗೆ ಹೋಗುವ ದಾರಿಯಲ್ಲೇ ತಿರುಗಿ ಆ ದಾರಿಯಲ್ಲೇ ಮುಂದೆ ಹೋದರೆ ಒಂದು ಏರುಮಾರ್ಗ ಇದೆ. ಅಲ್ಲಿಂದ ಒಂದೆರಡು ಫರ್ಲಾಂಗ್ ಕಾಡುದಾರಿಯಲ್ಲಿ ನಡೆದರೆ ಅದೇ ಮಾಬಲಣ್ಣನ ಮನೆ. ಆದ್ರೂ ದೋಸೆ ತಿಂದೇ ಹೋಗಿ, ದೋಸೆ ತಿಂದ್ರೆ ಮಾತ್ರ ದಾರಿ ಸಿಗಬಹುದು ನಿಮಗೆ.
ಸರಿ, ಧನ್ಯವಾದ. ದೋಸೆ ಇನ್ನೊಮ್ಮೆ ಬಂದಾಗ ತಿನ್ನುತ್ತೇನೆ.

----
ದಾರಿ ತಪ್ಪಿತು ನಿಜವಾಗಿಯೂ. ಎಲಾ ದೋಸೆಯ ಮಹಿಮೆಯೇ, ಪುನಃ ವಾಪಸ್ ಬಂದು ದೋಸೆ ತಿಂದು ಮೊದಲು ಹೇಳಿದಂತೇ ನಡೆದರೆ ಮಾಬಲಣ್ಣನ ಮನೆಗೆ ಹೋದೆ. ಪರಮಾಶ್ಚರ್ಯವಾದರೂ ತಲೆಯಲ್ಲಿ ಹುಳ ಬಿಟ್ಟಂತೆ.
--
ತಪ್ಪಿದ್ದು : ನೇರವಾಗಿ ಬಂದಾಗ ರಾಮಣ್ಣನ ಹೋಟೆಲ್ ಕಂಡಿತು. ನಾನು ಬಲಬದಿಗೆ ಹೋಗಬೇಕಿತ್ತು ಮೊದಲೇ, ನನಗೆ ದಾರಿ ಹೇಳಿಕೊಟ್ಟ ದೇವರು ರಾಮಣ್ಣನ ಹೋಟೆಲಿನಿಂದ ಬರುವಾಗ ಎಡಬದಿಗೆ ಹೋಗಲು ಹೇಳಿದ್ದ. ದೋಸೆ ಬೇಡವೆಂದ ನಾನು ಸೋತಿದ್ದು ಕೇವಲ ಎಡ-ಬಲದ ವಿಚಾರದಲ್ಲಾಗಿತ್ತು..

ಈ ಕತೆ ಯಾರಲ್ಲೂ ಹೇಳಿಲ್ಲ ಇನ್ನೂ!!

6 comments:

  1. ಈ ಕಥೆ ಚೆನ್ನಾಗಿದೆ ಈಶ್ವರಣ್ಣ. ಓದಿಸಿದ್ದಕ್ಕೆ ವಂದನೆಗಳು.

    ReplyDelete
  2. ha ha ha olleya kathe sir. chennaagide.

    ReplyDelete
  3. kathe oLLediddu, also, communication gaps nnu thamaashe yinda thOrisutthade.

    ReplyDelete
  4. ಈಗ ನಮಗೂ ರಾಮಣ್ಣನ ಹೋಟೆಲಿಗೆ ಹೋಗುವ ಸರೂತ ದಾರಿ ಬೇಕು :)

    ReplyDelete
  5. ಕೆಲವೊಮ್ಮೆ ದಾರಿ ಹೇಳುವವನಿಗಿರುವಷ್ಟು ವ್ಯವಧಾನ ಕೇಳುವವನಿಗಿರುವುದಿಲ್ಲ.....ಅಲ್ಲವೇ...?

    ReplyDelete