ಎರಡು ಮಾತುಗಳು.
೧.
ಅವಳು ಹಾಗೆಯೇ
ಉಳಿದ ಲಿಪ್’ಸ್ಟಿಕ್ಕನ್ನ ಸೀಟಿಗೊರೆಸಿದಳು.
ಸಣ್ಣ ಪೋರ ಮಗು,
ಸೀಟಿನಿಂದ ತೆಗೆದು ಮುಖಕ್ಕೆ ಹಚ್ಚಿಕೊಂಡ!
ಅವಳು ಪುಟ್ಟನ ಮುಖವನ್ನು ಶಾಲಿನಿಂದ ಒರೆಸಿದಳು."
೨.
ಇನ್ನೂ ಹನ್ನೆರಡರ ಪೋರ
ಹೋಟೆಲೊಂದರಲ್ಲಿ
"ಇಲ್ಲಿ ಬಾಲ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದಿಲ್ಲ" ಎಂಬ
ಬೋರ್ಡಿಗೆ
ಮೊಳೆ ಹೊಡೆಯುತ್ತಿದ್ದ.
ನಾನು ನೋಡಿದೆ.
ಹೋಟೆಲ್ ಮಾಲೀಕನೂ ನೋಡುತ್ತಿದ್ದ."
ಮೊದಲ ಹನಿಯಲ್ಲಿನ ಪಾಠ ಕಲಿತರೆ ಒಳಿತು. ಮೊದಲೇ ಆಕೆ ತನ್ನ ಗಲೀಜನ್ನು ತಾನು ಒರೆಸಿಕೊಂಡರೆ ಚೆಂದಿತ್ತು.
ReplyDeleteಎರಡನೇ ಹನಿಯ ವೈರುಧ್ಯತೆ ಯೋಚಿಸಬೇಕಾದ ವಿಚಾರ.